ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬಂಟ್ವಾಳ: ಎಸ್.ಎಸ್.ಎಫ್ ಕಾರ್ಯಕರ್ತ ಇಸಾಖ್ ಮೇಲೆ ಹಲ್ಲೆಗೆ ವಿವಿಧ ಸಂಘಟನೆಗಳ ವಿರೋಧ

ಬಂಟ್ವಾಳ: ಎಸ್.ಎಸ್.ಎಫ್ ಕಾರ್ಯಕರ್ತ ಇಸಾಖ್ ಮೇಲೆ ಹಲ್ಲೆಗೆ ವಿವಿಧ ಸಂಘಟನೆಗಳ ವಿರೋಧ

Wed, 20 Jan 2010 18:09:00  Office Staff   S.O. News Service
ಬಂಟ್ವಾಳ, ಜನವರಿ 20:  ಎಸ್ ಎಸ್ ಎಫ್ ಕಾರ್ಯಕರ್ತ ಇಸಾಖ್ ಮೇಲೆ ಇತ್ತೀಚೆಗೆ ನಡೆಸಿರುವ ಮಾರಣಾಂತಿಕ ಹಲ್ಲೆಯನ್ನು ಅಖಿಲಭಾರತ ಸುನ್ನೀ ಮದರಸ ಮೆನೆಜ್ ಮೆಂಟ್ ಅಸೋಸಿಯೇಷನ್ ನ ಬಂಟ್ವಾಳ ಯೂನಿಟ್,ಸುನ್ನೀ ಎಜುಕೇಷನಲ್ ಡೆವಲಪ್ ಮೆಂಟ್ ಕಮಿಟಿ,ಸುನ್ನೀ ಜಂ-ಇಯ್ಯತುಲ್ ಮು‌ಅಲ್ಲಿಮೀನ್ ಬಂಟ್ವಾಳ ರೇಂಜ್,ಹಾಗೂ ಫರಂಗಿಪೇಟೆ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಖಂಡಿಸಿದೆ.
 
ಬುಧವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲಭಾರತ ಸುನ್ನೀ ಮದರಸ ಮೆನೆಜ್ ಮೆಂಟ್ ಅಸೋಸಿಯೇಷನ್ ನ ಬಂಟ್ವಾಳ ಯೂನಿಟ್‌ನ ಅಧ್ಯಕ್ಷರಾದ ಬಿ.ಎಸ್ .ಅಬೂಬಕರ್,ಕೃತ್ಯವೆಸಗಿದ ಆರೋಪಿಗಳನ್ನು ಪೋಲಿಸರು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿದರು.
 
ಪುದು ಗ್ರಾಮದ ಪೆರಿಮಾರ್ ನಲ್ಲಿ ಕಳೆದ ಹಲವು ವರ್ಷಗಳಿಂದ ಮುಸ್ಲಿಂ ಸಮುದಾಯದವರು ಮಸೀದಿ ಮದ್ರಸಗಳನ್ನು ಸ್ಥಾಪಿಸಿಕೊಂಡು ಶಂತಿಯುತವಾಗಿ ಬದುಕುತ್ತಿದ್ದಾರೆ. ಆದರೆ ಇಲ್ಲಿ ಅಖಿಲ ಭಾರತ ಸುನ್ನೀ ವಿಧ್ಯಾಭ್ಯಾಸ ಬೋಡ್ ನ ಪಠ್ಯಕ್ರಮ ಅನುಸರಿಸಲಾಗುತ್ತಿದ್ದು ಇದಕ್ಕೆ ಇದೇ ಸಮುದಾಯದ ಕೆಲ ವ್ಯಕ್ತಿಗಳು ಪ್ರತಿರೋಧವೊಡ್ಡುತ್ತಿದ್ದು  ಶಂತಿ ಭಂಗಕ್ಕೆ ಯತ್ನಿಸುತ್ತಿದ್ದಾರೆ ಎಂದರು. ಅಲ್ಲದೆ ಹಲವು ರಾದ್ದಾಂತಗಳಿಗೆ ಕಾರಣವಾಗುತ್ತಿರುವಸ್ಥಳೀಯ ಆರೋಪಿಗಳ ವಿರುದ್ದ ಪೋಲಿಸರಿಗೆ ದೂರು ನೀಡಲಾಗಿದೆ ಯಾದರೂ ಪೋಲಿಸರು ನಿರ್ಲಕ್ಷ್ಯ ತಾಳುತ್ತಿದ್ದಾರೆ ಎಂದರು. ಇಸಾಖ್ ಮೇಲೆ ಹಲ್ಲೆ ನಡೆಸಿದ ಪ್ರಮುಖ ಆರೋಪಿಹಮೀದ್ ಆಲಿಯಾಸ್ ಅಮ್ಮಿ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದ ಬಂಟ್ವಾಳ ಪೋಲಿಸರು ಆತನನ್ನು ಹಿಂಬಾಗಿಲಿನಿಂದ ಬಿಟ್ಟುಬಿಟ್ಟಿದ್ದಾರೆ ಎಂದು ಆರೋಪಿಸಿದ ಅವರು, ಪ್ರಕರಣಗಳನ್ನು ಭೇಧಿಸಿ ಸುದ್ದಿ ಮಾಡುತ್ತಿರುವ ಬಂಟ್ವಾಳ ಪೋಲಿಸರು ಸದ್ರಿ ಪ್ರಕರಣಕ್ಕೆ ಸಂಬಂಧಿಸಿ ಸರಿಯಾದ ಸ್ಪಂದನೆ ನೀಡುತ್ತಿಲ್ಲ ಎಂದರು.
 
ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಇದ್ದಲ್ಲಿಸುನ್ನೀ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಮುಂದಾಗಲಿದೆ ಎಂದವರು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಘಟನೆಗಳ ಪ್ರಮುಖರಾದಕೆ.ಖಾಸಿಂ ಸಹದಿ,ವಿ.ಎ.ಮನ್ಸೂರ್ ಮದನಿ,ಅಬ್ದುಲ್ ಖಾದರ್ ಸಖಾಫಿ, ಅಬ್ದುಲ್ ಮಜೀದ್ ಸಖಾಫಿ, ಬಶೀರ್ ಮದನಿ, ಅಬ್ದುಲ್ ರಝಾಕ್ ಹಾಜಿ, ಆದಂಕುಂಞ ಮೊದಲಾದವರು ಉಪಸ್ಥಿತರಿದ್ದರು.


Share: